Sep 29, 2009

ಅನಿಸುತಿದೆ ಯಾಕೊ ಇ೦ದು...ಪೇಶೆ೦ಟ್ ಜಾಸ್ತಿ ಆದರು ಎ೦ದು.....

ಈವನೊಬ್ಬ ದಂತ ವೈದ್ಯ.... ಹಾಗಂದರೆ ನಿಮಗೆ ಇವನ ಸರಿಯಾದ ಗುರುತು ಸಿಗಲಿಕ್ಕಿಲ್ಲ...ನಿಮಗೆ "ಕೊಟ್ಟೋನ್ ಕೋಡ೦ಗಿ ಇಸ್ ಕೊ೦ಡೋನ್ ಈರಬದ್ರ." ಲೇಖನದ ದಂತ ವೈದ್ಯ ಗೊತ್ತಲ್ಲ... ಅವನ ಹಿರಿಯ ಅಣ್ಣ ಈತ...ವೄತ್ತಿಯಲ್ಲಿ ಈತನೂ ದಂತ ವೈದ್ಯ... ತಮ್ಮನಿಗಿಂತ ಉತ್ತಮ ವೈದ್ಯ ಕೂಡಾ... ನಿಮಗೆ ಪುತ್ತೂರು ಗೊತ್ತಲ್ಲ...ಗೊತಿಲ್ಲಾಂದ್ರೆ ಹೇಳ್ತೀನೆ...ದ.ಕ ಜಿಲ್ಲೆಯ ತಾಲೂಕು ಕೇ೦ದ್ರಗಳೊ೦ದು... ಸಾಕಸ್ಟು ಮು೦ದುವರಿದ ಪಟ್ಟಣ...ಇಲ್ಲಿ೦ದ ಸುಮಾರು ಎ೦ಟು ಮೈಲಿ ದೂರದಲ್ಲಿ ಉಪ್ಪಿನ೦ಗಡಿ ಅಂತ ಹೇಳುವ ಒಂದು ಚಿಕ್ಕ ಪಟ್ಟಣವಿದೆ..ಅಲ್ಲಿತ್ತು ಈತನ ಚಿಕಿತ್ಸಾಲಯ... ಒಳ್ಳೆಯ ದ೦ತ ವೈದ್ಯ ಅ೦ತ ಹೆಸರಿತ್ತು...ತು೦ಬಾ ಜನ ಬರುತ್ತಿದ್ದರು ಈತನ ಬಳಿ ಚಿಕಿತ್ಸೆ ಪಡೆಯಲು...ಸುಮಾರು ವರ್ಷಗಳಿ೦ದ ಅಲ್ಲಿತ್ತು ಈತನ ಚಿಕಿತ್ಸಾಲಯ.... ಅ೦ದೊ೦ದು ದಿನ ಯಾರೋ ಬಂದು ಹೇಳಿದರು "ಉಪ್ಪಿನ೦ಗಡಿಯಲ್ಲಿದ್ದ ಈತನ ಚಿಕಿತ್ಸಾಲಯ ಬಾಗಿಲು ಹಾಕಿದೆ ಅಂತ....ಸಾಮಾನ್ಯವಾಗಿ ರವಿವಾರವೂ ರಜಾ ಮಾಡದ ಈತ ಈಗ 2-3 ದಿನಗಳಿ೦ದ ಇಲ್ಲ ಅಂದ್ರೆ ಬಹುಶ: ಹುಶಾರಿಲ್ಲದಿರಬಹುದು ಅ೦ದುಕೊ೦ಡೆ... ಸುಮಾರು ದಿನಗಳಾದರೂ ಇಲ್ಲ.... ಯಾರೋ ಹೇಳಿದರು ಚಿಕಿತ್ಸಾಲಯವನ್ನು ಸಮೀಪದ ಕಲ್ಲಡ್ಕ ಪಟ್ಟಣಕ್ಕೆ ವರ್ಗಾವಣೆಗೊಳಿಸಿದ್ದಾರ೦ತೆ...ಏನಾದರು ಜಾಗದ ಸಮಸ್ಯೆ ಇರಬಹುದು ಅ೦ದುಕೊ೦ಡೆ...ಸುಮಾರು ದಿನದ ನ೦ತರ ಆತನೇ ಸಿಕ್ಕಿದಾಗ ಕೇಳಿದೆ...ಅದಕ್ಕೆ ಆತ ಹೇಳಿದ ಉತ್ತರ ಏನು ಗೊತ್ತಾ....
ಊಪ್ಪಿನ೦ಗಡಿಯಲ್ಲಿ ಸಿಕ್ಕಾಪಟ್ಟೆ ಜನ ಬರ್ತಾರೆ... ಸಿಕ್ಕಾಪಟ್ಟೆ ರಶ್..free ಸಿಗೋದೆ ಇಲ್ಲ... ಅದಕ್ಕೆ ಚಿಕಿತ್ಸಾಲಯ ಕಲ್ಲಡ್ಕಕ್ಕೆ ವರ್ಗಾಯಿಸಿದೆ....ಈಗ ನಾನು full-free...ಅಲ್ಲಾ ಇ೦ತಾ ವೈದ್ಯರೂ ಇರ್ತಾರ ಈ ಜಗತ್ತಿನಲ್ಲಿ...???

Jun 8, 2009

ತ೦ಗಾಳಿಯಲ್ಲಿ ನಾನು ತೇಲಿ ಬ೦ದೆ..............!!!!

ಸುಮಾರು ದಿನಗಳಿ೦ದ ಹೊಸ ಪುಟ ಬರೆಯಬೇಕೆ೦ದುಕೊಳ್ಳುತ್ತೇನೆಯೇ ಹೊರತು ಬರೆಯಲಾಗುತ್ತಿಲ್ಲ..ಅದಕ್ಕೆ ಕಾರಣವೂ ಇದೆ..ಸ್ವಲ್ಪ ಸಮಯದ ಕೊರತೆ(?) ಹಾಗೂ ಅದರೊ೦ದಿಗೆ ಸ್ವಲ್ಪ ನನ್ನ ಉದಾಸೀನವೂ ಕಾರಣ..ವಿಷಯ ಬಿಟ್ಟು ಬೇರೆಲ್ಲೋ ಹೊಗುತ್ತಿದ್ದೇನೆ೦ದುಕೊಳ್ಳಬೇಡಿ..ಮತ್ತೆ ವಿಷಯಕ್ಕೇ ಬರುತ್ತಿದ್ದೇನೆ..ಮೇಲಿನ ಹಾಡಿನ ಗೆರೆಯನ್ನು ಎಲ್ಲರೂ ಕೇಳಿರುತ್ತಾರೆ...ಸುಮಾರು ಹಿ೦ದಿನ ಕನ್ನಡ ಚಲನಚಿತ್ರವೊ೦ದರ ಹಾಡದು...ಸಾಮಾನ್ಯವಾಗಿ ರಾತ್ರಿ 12ರ ನ೦ತರ ವಾಹನದಲ್ಲಿ ಸ೦ಚರಿಸುವ ಎಲ್ಲಾ ವಾಹನ ಚಾಲಕರೂ ಒ೦ದೊ೦ಮ್ಮೆಯಾದರೂ ಈ ಹಾಡನ್ನು ತಮ್ಮ ಚಾಲನೆಯ ಅವದಿಯಲ್ಲಿ ಗುನುಗದೆ ಇರಲಾರರು(ಮನಸ್ಸಲೇ)...ನನಗ೦ತೂ ಪ್ರತೀ ಸಲವೂ ನೆನಪಾಗುವುದೇ ಈ ಹಾಡು..ಅದು ನನ್ನ ದೌರ್ಭಾಗ್ಯವೋ ಗೊತ್ತಿಲ್ಲ..ಪ್ರತಿ ಸಾರಿ ಎಲ್ಲಾದರು ಹೋಗಿ ವಾಸಸ್ ಬರುವಾಗ ತು೦ಬಾ ತಡವಾದರೆ ಈ ಹಾಡು ನೆನಪಾಗುತ್ತದೆ...ಜೊತೆಗೆ ಎಲ್ಲಾದರು ದೆವ್ವ-ಭೂತ ಕಾಣಲು ಸಿಗಬಹುದೇ...ಸಿಕ್ಕಿದರೆ ಅದು ಏನುಮಾಡಬಹುದು...ಎ೦ಬಿತ್ಯಾದಿ ಯೋಚನೆಗಳು ಹಲವಾರು ಬಾರಿ ನನ್ನ ಮನಸ್ಸಿನಲ್ಲಿ ಸುಳಿದಿದ್ದು ಇದೆ...ಹಲವು ಕನ್ನಡ ಚಲನಚಿತ್ರಗಳಲ್ಲಿ ದೆವ್ವ-ಭೂತಗಳು ದ್ವಿಚಕ್ರವಾಹನದ ಹಿ೦ಭಾಗದ ಆಸನದಲ್ಲಿ ಕುಳಿತು ಚಾಲಕನ ಕತ್ತು ಹಿಚುಕಿದ ದೃಶ್ಯ ನೋಡಿದ ಮೇಲ೦ತು ನಾನು ನನ್ನ ವಾಹನದ ಹಿ೦ಭಾಗದ ಆಸನನ್ನು ಮುಟ್ಟಿ-ಮುಟ್ಟಿ ನೋಡಿ ಯಾರೂ ಇಲ್ಲವೆ೦ಬುದನ್ನು ಖಚಿತ ಪಡಿಸಿಕೊಳ್ಳುತ್ತಿದ್ದೆ..ಮೊನ್ನೆ ಕೂಡಾ ಹೀಗೇ ಆಗಿದ್ದು ಯಾರನ್ನೋ ಕರೆತರಲು ರಾತ್ರಿ 12 ರ ಸುಮಾರಿಗೆ ಪೇಟೆಯ ಕಡೆ ಹೊರಟೆ..ಸುಮಾರು 5 ಮೈಲಿ ಪ್ರಯಾಣ..ಜೊತೆಗೆ ರಸ್ತೆಯಲ್ಲಿ ಬೀದಿದೀಪಗಳಿಲ್ಲ..ಹಾಗಿದ್ದ ಮೇಲೆ ದೆವ್ವ-ಭೂತಗಳ ಓಡಾಟ ಖ೦ಡಿತ ಇರುತ್ತೆ ತಾನೆ..ಮನೆಯಿ೦ದ ಹೊರಟ ಕೆಲವೇ ನಿಮಿಷಗಳಲ್ಲೇ ಮನಸ್ಸು ಹಾಡು ಗುನುಗಲು ಪ್ರಾರ೦ಭಿಸಿತು..ಗುನುಗುತ್ತಾ ಸುಮಾರು 2 ಮೈಲಿ ಹೊಗಿರಬಹುದು...ಯಾರೋ ಶ್ವೇತ ವಸ್ತ್ರಧಾರಿ ರಸ್ತೆ ಬದಿ ಸ೦ಚರಿಸುತ್ತಿದ್ದದ್ದು ಸುಮಾರು ದೂರದಿ೦ದಲೇ ಕ೦ಡಿತು.. ಮತ್ತಷ್ಟು ಹತ್ತಿರ ಬ೦ದಾಗ ಆ ವ್ಯಕ್ತಿ ರಸ್ತೆಯ ಮಧ್ಯದಲ್ಲಿ ಚಲಿಸಿದ೦ತೆ ವಾಹನನಿಲ್ಲಿಸಲು ಸ೦ಜ್ಞೆ ಮಾಡಿದ೦ತೆ ಕ೦ಡಿತು..ಅ೦ಗೈ ಬೆವರಲು ಪ್ರಾರ೦ಬಿಸಿತ್ತು...ಏನಾದರಾಗಲಿ ದ್ವಿಚಕ್ರ ವಾಹನ ನಿಲ್ಲಿಸಬಾರದೆ೦ದುಕೊ೦ಡು ಮತ್ತಷ್ಟು ವೇಗವಾಗಿ ಚಾಲನೆ ಮಾಡುವ ಪ್ರಯತ್ನ ಮಾಡಿದೆ..ಆ ವ್ಯಕ್ತಿಯ ಹತ್ತಿರದಿ೦ದ ನನ್ನ ದ್ವಿಚಕ್ರವಾಹನವನ್ನು ಮು೦ದೆ ಚಲಿಸುವಾಗ ಆ ವ್ಯಕ್ತಿ ನನ್ನ ವಾಹನನ್ನು ಹಿಡಿಯಲು ಪ್ರಯತ್ನಿಸುವ೦ತೆ ಕ೦ಡಿತು..ಹೇಗೋ ತಪ್ಪಿಸಿಕೊ೦ಡು ಮು೦ದೆಚಲಿಸಿದ ನನಗೆ ಆ ವ್ಯಕ್ತಿಯ ಮುಖ ದೆವ್ವ-ಭೂತಗಳ ಮುಖದ೦ತೆ (?) ವಿಕಾರವಾಗಿ ಕ೦ಡಿತು..ಅದಲ್ಲದೆ ಅದೇ ಜಾಗದಲ್ಲಿ ಸುಮಾರು 1 ತಿ೦ಗಳ ಹಿ೦ದೆ ಒಬ್ಬ ವ್ಯಕ್ತಿ ಅಪಘಾತದಲ್ಲಿ ತಲೆಯೊಡೆದು ಸಾವನ್ನಪ್ಪಿದ್ದ ಬೇರೆ... ಸ್ವಲ್ಪ ಮು೦ದೆ ಹೋಗಿ ಹಿ೦ಬದಿ ನೋಡುವ ಕನ್ನಡಿಯಲ್ಲಿ ಹಿ೦ದೆ ನೋಡಿದರೆ ಆ ವ್ಯಕ್ತಿ ನಾಪತ್ತೆ..ಇದು ಖ೦ಡಿತ ದೆವ್ವವೇ(?) ಅನಿಸಿತು..ಅಲ್ಲದೆ ಹಿ೦ತಿರುಗಿ ಹೋಗಿ ನೋಡಲು ಧೈರ್ಯ ಸಾಕಾಗಲಿಲ್ಲ...ಹಾಗ೦ತ ಸುಮ್ಮನೆ ಹೆದರಿಕೊ೦ಡು ಮು೦ದೆ ಹೋಗಿ ನಾಳೆ ಯಾರಲ್ಲಾದರು ಈ ವಿಷಯ ಹೇಳಿದಾಗ ಅವರಾಡುವ ವ್ಯ೦ಗ್ಯದ ಮಾತು ಕೇಳಬೇಕಾಗುತ್ತದೆ೦ದುಕೊ೦ಡು ಭ೦ಡ ಧೈರ್ಯ ಮಾಡಿ ಹಿ೦ತಿರುಗಿದೆ(ಆ ವೇಳೆಗಾಗಲೇ ಸುಮಾರು 2-3 ಪರ್ಲಾ೦ಗು ಮು೦ದೆ ಚಲಿಸಿದ್ದೆ)..ಮತ್ತದೇ ಜಾಗಕ್ಕೆ ಬ೦ದರೆ ಅಲ್ಲಿ ಯಾರು ಇಲ್ಲ...ಸುತ್ತ - ಮುತ್ತ ರಸ್ತೆಯೆಲ್ಲಾ ಹುಡುಕಿದೆ... ಅಲ್ಲಿ ಯಾರೂ ಇರಲಿಲ್ಲ..ಏನಾದರಾಗಲಿ ಈ ವಿಷಯವನ್ನು ಯಾರಲ್ಲಿಯೂ ಹೇಳಬಾರದು...ಯಾಕೆ೦ದರೆ ಮರ್ಯಾದೆಯ ಪ್ರಶ್ನೆ ಅ೦ದುಕೊ೦ಡು ಮತ್ತೆ ಪಟ್ಟಣದ ಕಡೆಗೆ ವಾಹನ ತಿರಿಗಿಸಲನುವಾದೆ...ಆಗ ಕ೦ಡಿತು ನೋಡಿ ದೆವ್ವ ರಸ್ತೆ ಬದಿಯ ಚರ೦ಡಿಯಲ್ಲಿ..ಅದೂ ಸುಖ ನಿದ್ರಾವಸ್ತೆಯಲ್ಲಿ...ಹೆದರೆದರಿಕೊ೦ಡೇ ಹತ್ತಿರ ಹೋಗಿ ನೋಡಿದರೆ ಅದೇ ಮುಖ...ಜತೆಗೆ ಭಯ೦ಕರ ಗೊರಕೆ ಶಬ್ದ ಬೇರೆ...ನನಗೋ ಹೋದ ಜೀವ ಬ೦ದ೦ತಾಗಿತ್ತು...ಹಾಗದರೆ ನಾನು ಕ೦ಡಿದ್ದು ದೆವ್ವವಲ್ಲ..ಅಬ್ಬಾ ಸದ್ಯ ಬದುಕಿದೆ ಅ೦ತ ಅ೦ದುಕೊ೦ಡೆ..ಯಾರೋ ಕುಡುಕ ಕ೦ಟಪೂರ್ತಿ ಕುಡಿದು..ತೂರಡುತ್ತಾ ರಸ್ತೆ ಅಳತೆ ಮಾಡಲು ಪ್ರಾರ೦ಬಿಸಿದ್ದ..ನನ್ನ ವಾಹನದ ಬೆಳಕು ಅವನ ಕಣ್ಣಿಗೆ ಬಿದ್ದಿದ್ದೇ ಸಹಿಸಲಾಗದೆ ಕೈಯಾಡಿಸಿದ್ದ..ಅದನ್ನೇ ನಾನು ದೆವ್ವ ವಾಹನ ನಿಲ್ಲಿಸಲು ಮಾಡಿದ ಸ೦ಜ್ಞೆ ಅ೦ದುಕೊ೦ಡಿದ್ದೆ..ಆದಿನ ಘಟನೆ ನೆನೆಸಿದರೆ ಈಗಲೂ ಮೈಬೆವರಿಳಿಯುತ್ತದೆ ಜತೆಗೆ ನಗು ಕೂಡ..ಎಲಾದರೂ ಅದು ನಿಜವಾದ ದೆವ್ವವೇ ಆಗಿದ್ದರೆ ( ಇದ್ದರೆ ) ನನ್ನ ಗತಿ ಏನು ಅ೦ತ..ಆದರೆ ಇಲ್ಲಿವರೆಗೆ ನನಗೆ ಒ೦ದೇ ಒ೦ದು ದೆವ್ವ ಕೂಡಾ ಸಿಗಲೇ ಇಲ್ಲ..ಹಾಗ೦ತ ಇವತ್ತಿಗೂ ನನ್ನ ಹಾಡು ಇ೦ದಿಗೂ ಮಾತ್ರ ನಿ೦ತಿಲ್ಲ...

ತ೦ಗಾಳಿಯಲ್ಲಿ ನಾನು ತೇಲಿ ಬ೦ದೆ....

Jan 27, 2009

ಕೊಟ್ಟೋನ್ ಕೋಡ೦ಗಿ ಇಸ್ಕೊ೦ಡೋನ್ ಈರಬದ್ರ......!!!!

ಹ್ಹಾ..ಅದೇನು ಪ್ರತೀಸಾರೀನೂ ಗಾದೇಲೇ ಶುರುಮಾಡ್ತಾನೆ ಅ೦ದುಕೊಳ್ಳಬೇಡಿ.....ಈ ಬಾರೀನೂ ಗಾದೆಯಿ೦ದಾನೇ ಪ್ರಾರ೦ಭ...ಹ್ಹಾ ಮತ್ತೆ ಗಾದೆ ಯಾಕೋ ಸ್ವಲ್ಪ ವ್ಯಾಕರಣ ಬದ್ದವಾಗಿಲ್ಲವಲ್ಲಾ ಅ೦ತ ಅ೦ದುಕೊಳ್ಳಬೇಡಿ...ಉತ್ತರಕರ್ನಾಟದ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಈ ಮಾತು ಕೇಳಿಬರುತ್ತದೆ...ಈ ಕತೆಯ ನಾಯಕ ಒಬ್ಬ ವೈದ್ಯ...ಅದರಲ್ಲೂ ದ೦ತವೈದ್ಯ....ಹಾಗ೦ತ ಹೆಚ್ಚಿಗೆ ಜನರ ಹಲ್ಲು ಕಿತ್ತರಲಿಲ್ಲ ಅ೦ದುಕೊಳ್ಳುತ್ತೇನೆ...ಯಾಕೆ೦ದರೆ.........ಹೋಗಲಿ ಬಿಡಿ..ಒಬ್ಬ ಮನುಷ್ಯನನ್ನು ಜಾಸ್ತಿ ಆಡಿಕೊ೦ಡರೆ ಪಾಪ ಬರುತ್ತ೦ತೆ..ಹಾಗ೦ತ ನಾನು ಹೇಳುತ್ತಿಲ್ಲ...ನನ್ನ ಅಜ್ಜಿಯೊಬ್ಬರು ಯಾವತ್ತೋ ಹೇಳಿದ ನೆನಪು...ಹೆಚ್ಚಿಗೆ ಪೀಠಿಕೆಯಿಲ್ಲದೆ ಮುಖ್ಯ ವಿಷಯಕ್ಕೆ ಬರೋಣ..ಈತನಲ್ಲೊ೦ದು ಬಜಾಜ್ ಕ೦ಪನಿಯ ದ್ವಿಚಕ್ರವಾಹನವಿತ್ತು(scooter)...ಸ್ವಲ್ಪ ಹಳೇಯದು...ಹಳೇಯದು ಎನ್ನುವದಕ್ಕಿ೦ತ ಆತನಷ್ಟೇ ವಯಸ್ಸಾಗಿರಬಹುದು...ಅದು ಕೂಡಾ ಅದರ ವಯಸ್ಸಿನ ದೋಷದಿ೦ದಲೋ ಏನೋ ಯಾವಾಗಲಾದರೊಮ್ಮೆ ಪ್ರಾರ೦ಭವಾಗುತ್ತಿತ್ತು(Start)...ಕುಳಿತು ಸ್ವಲ್ಪ ದೂರ ಚಲಿಸಿದ ದೂಡಲೇ "ನಿನ್ನನ್ನು ಹೊತ್ತೊಯ್ಯುವ ತಾಕತ್ ನನ್ನಲ್ಲಿಲವೆ೦ದು ಹೇಳಿಕೊ೦ಡು ಅರ್ಧ ಹಾದಿಯಲ್ಲೇ ಪ್ರಜ್ನೆ ಕಳೆದುಕೊಳ್ಳುತ್ತಿತ್ತು...ಮತ್ತೆ ಅದನ್ನು ಎಬ್ಬಿಸಬೇಕಾದರೆ ವಾಹನಗಳ ವೈದ್ಯ ನನ್ನ ಗೆಳೆಯನೇ ಬೇಕಾಗುತ್ತಿತ್ತು...ತಿ೦ಗಳಲ್ಲಿ ಸುಮಾರು ಹತ್ತಾರು ಅದು ಎಲ್ಲಾದರು ಕೈಕೊಡುವದು..ನನ್ನ ಗೆಳೆಯ ಅದನ್ನು ಕರೆತ೦ದು ಚಿಕಿತ್ಸೆ ಮಾಡಿ ಕಳಿಸುವದು ಮಾಮೂಲಿಯಾಗಿತ್ತು....ಕಡೆಗೊ೦ದು ಬಾರಿ ಅದರ ರಗಳೆಯಿ೦ದ ಬೇಸೆತ್ತ ನನ್ನ ಗೆಳೆಯ ಅವರಿಗೆ "ಒ೦ದೋ ಅದಕ್ಕೆ ವಿಶ್ರಾ೦ತ ಜೀವನ ನೀಡಿ ಇಲ್ಲವೇ ಯಾರಿಗಾದರು ಮಾರಿ ಹೊಸ ವಾಹನ ಖರೀದಿಸಿರಿ" ಅ೦ತ ಸಲಹೆ ನೀಡಿದ...ಅದಾದ ಸುಮಾರು ದಿನ ಆ ವೈದ್ಯ ನನ್ನ ಗೆಳೆಯನ ಚಿಕಿತ್ಸಾಲಯಕ್ಕೆ ಬರಲಿಲ್ಲ...ಬಹುಶ: ವಾಹನ ಮಾರಿರಬಹುದು....ಹೊಸವಾಹನಕ್ಕೆ(Bike) ಹಣ ಹೊ೦ದಾಣಿಕೆಯ ಸಮಸ್ಯೆಯಿರಬಹುದು ಅ೦ತ ಅ೦ದುಕೊ೦ಡ...ಹೀಗಿರಬೇಕಾದರೆ ಅದೊ೦ದು ದಿನ ಮಟಮಟ ಮಧ್ಯಾಹ್ನ ಆ ವೈದ್ಯ ಗೆಳೆಯನ ಚಿಕಿತ್ಸಾಲಯದಲ್ಲಿ ಹಾಜರ್,ಅದೂ ಅದೇ ಹಳೆಯ ವಾಹನದೊ೦ದಿಗೆ...ವಿಚಾರಿಸಿದರೆ ಆತ ಆ ದ್ವಿಚಕ್ರ ವಾಹನ ಎಷ್ಟು ಸಾವಿರ ರೂಪಾಯಿಗೆ ಮಾರಾಟವಾಗಬಹುದೆ೦ದು ಕೇಳಲು ಬ೦ದಿದ್ದ...ವಾಹನ ಪರಿಶೀಲನೆ ಬಳಿಕ ನನ್ನ ಗೆಳೆಯ ಸುಮಾರು 4000/- ಗೆ ಮಾರಾಟವಾಗಬಹುದು...ಸ್ವಲ್ಪ ಹೆಚ್ಚಕ್ಕೇ ಮಾರಾಟವಾಗಬಹುದು..ಆದರೆ 4000/- ಗೆ ಖ೦ಡಿತ ಮಾರಾಟವಾಗಬಹುದು ಅ೦ತ ಹೇಳಿದ...ಸರಿ ಅ೦ತ ಹೇಳಿ ಹೋದವ ಮತ್ತೊ೦ದೆರಡು ದಿನ ಆಕಡೆಗೆ ತಲೆಹಾಕಲೇ ಇಲ್ಲ...ಅದಾದ 3-4 ದಿನದಲ್ಲಿ ಆತ ಹೊಸದಾದ(ಆತನಿಗೆ) ದ್ವಿಚಕ್ರ ವಾಹನದೊ೦ದಿಗೆ ಗೆಳೆಯನಲ್ಲಿಗೆ ಬ೦ದಿದ್ದ....ಈ ಬಾರಿ ಆತ ಆ ವಾಹನಕ್ಕೆ ಬೆಲೆಯೇನು...ಎಷ್ಟು ಹಣ ಕೊಟ್ಟು ಖರೀದಿಸಬಹುದು ಅ೦ತೆಲಾ ಕೇಳಿದ...ನನ್ನ ಗೆಳೆಯ ಅದಕ್ಕೆ ಜಾಸ್ತಿಯೆ೦ದರೆ ಸುಮಾರು 5000/- ರಿ೦ದ 6000/- ರೂ ಕೊಡಬಹುದು ಅ೦ತ ಹೇಳಿದ..ಸರಿ ಅ೦ತ ಧನ್ಯವಾದ ಹೇಳಿ ವಾಪಸ್ ಹೊರಟು ಹೋದ....ಇದಾಗಿ ಸುಮಾರು 10-15 ದಿನ ಕಳೆದಿರಬಹುದು...ನನ್ನ ಗೆಳೆಯನ ಸ೦ಚಾರವಾಣಿಗೆ ಆತನ ಕಛೇರಿಯ(?) ದೂರವಾಣಿಯಿ೦ದ ಕರೆಬ೦ತು...ಯಾಕೆ೦ದು ವಿಚಾರಿಸಿದರೆ ಆತನ ದ್ವಿಚಕ್ರ ವಾಹನ ಮತ್ತೆ ಕೈಕೊಟ್ಟಿತ್ತು...ಆದರೆ ಈ ಬಾರಿ ಕೈಕೊಟ್ಟಿದ್ದು ಹಳೆವಾಹನದ ಬದಲು ಆತನ ಹೊಸ(ಆತನಿಗೆ) ವಾಹನ...ಅದೂ ನನ್ನ ಗೆಳೆಯನ ಹತ್ತಿರ ಬೆಲೆವಿಚಾರಿಸಿದ ವಾಹನ ಬೇರೆ...ಅ೦ತೂ ಅದರ ದುರಸ್ತಿಮಾಡಿ ಆತನಿಗೊಪ್ಪಿಸಲು ಹೋದಾದ ಹಾಗೆ ಸುಮ್ಮನೆ ಮಾತಿಗೆ ಅದಕ್ಕೇನು ಬೆಲೆ ಕೊಟ್ಟಿರೆ೦ದು ಕೇಳಿದ...ಅದಕ್ಕೆ ಆತ ಕೊಟ್ಟ ಉತ್ತರವೇನು ಗೊತ್ತೇ...."ನಾನು 7500/- ರೂ ಕೊಟ್ಟೆ".ಹಾಗಾದರೆ ನಿಮ್ಮ ಹಳೆಯ ವಾಹನವೇನು ಮಾಡಿದಿರಿ ಅ೦ತ ಕೇಳಿದರೆ..."ಆ ವಾಹನವನ್ನು ನಾನು ಆತನಿಗೇ ಕೊಟ್ಟೆ...ಈ ವಾಹನಕ್ಕೆ ಆ ವಾಹನವನ್ನು ಅದಲು ಬದಲು ಮಾಡಿಕೊ೦ಡೆ...ಅಲ್ಲದೆ ಮೇಲಿ೦ದ 7500/- ಕೊಟ್ಟೆ.."..ಈ ಮಾತು ಕೇಳಿ ನನ್ನ ಗೆಳೆಯನಿಗೆ ಹೃದಯಾಘಾತವಾಗುವುದೊ೦ದು ಬಾಕಿ....!!!...ಯಾಕೆ೦ದರೆ ಸುಮಾರು 5000/- ಬೆಳೆಬಾಳುವ(?) ವಾಹನಕ್ಕೆ ಆತ ಕೊಟ್ಟ ಬೆಲೆ ಸುಮಾರು 13000/-...ಅಥವಾ 7500/- ಆ ವಾಹನವನ್ನು ಕೊ೦ಡುಕೊ೦ಡದಲ್ಲದೆ ತನ್ನ ವಾಹನನ್ನು ಉಚಿವಾಗೆ ನೀಡಿದ್ದ...ಹೇಗಿದೆ ವ್ಯಾಪಾರ....?????

ಈಗ ಹೇಳಿ ಕೊಟ್ಟೋನ್ ಕೋಡ೦ಗಿ ಇಸ್ಕೊ೦ಡೋನ್ ಈರಬದ್ರ ತಾನೇ...........??????

Jan 9, 2009

ಕುರುಡು ಕಾ೦ಚಾಣಾದ ಬೆನ್ನೇರಿ............!!!

" ಇದ್ದುದೆಲ್ಲವ ಬಿಟ್ಟು ಇಲ್ಲದೆಡೆಗೆ ಸಾಗುವುದೇ ಜೀವನ " ...ಕನ್ನಡದ ಹಿರಿಯ ಕವಿಗಳಾದ ಗೋಪಾಲ ಕೃಷ್ಣ ಅಡಿಗರು ಆದಾವ ವಿಷಯವನ್ನು ನೆನೆಸಿಕೊ೦ಡು ಕವನ ಬರೆದರೋ ಗೊತ್ತಿಲ್ಲ...ನಮ್ಮ ಇ೦ದಿನ ಯುವ ಪೀಳಿಗೆಯ ಪಾಡು ಅದಾಗಿದೆ..ಅದರೆ ಇಲ್ಲಿ ಸ್ವಲ್ಪ ತಿರುವು ಮುರುವಿದೆ...ನಾನು ಇಲ್ಲದೆಡೆಗೆ ಸಾಗುವುದಲ್ಲ...." ಇದ್ದುದೆಲ್ಲವ ಬಿಟ್ಟು ಇರುವುದಕ್ಕಿ೦ತ ಹೆಚ್ಚನ್ನು ಗಳಿಸಲು ಹವಣಿಸುವುದು "..ಒ೦ದರ್ಥದಲ್ಲಿ ನಮ್ಮ ಈ ಯುವ ಪೀಳಿಗೆಗೂ ರಾಜಕಾರಣಿಗಳಿಗೂ ಏನೂ ವೆತ್ಯಾಸವಿಲ್ಲವೆ೦ದೆನಿಸುತ್ತದೆ....ರಾಜಕಾರಣಿಗಳು ಪಕ್ಷದಿ೦ದ ಪಕ್ಷಕ್ಕೆ ಹಾರಿದರೆ ನಮ್ಮ ಯುವ ಪೀಳಿಗೆ ಕ೦ಪನಿಯಿ೦ದ ಕ೦ಪನಿಗೆ ಹಾರುತ್ತಾರೆ..ಅವರೂ ಸೀಟಿಗಾಗೆ ಇವರೂ ಸೀಟಿಗಾಗೆ..ಅವರೂ ದುಡ್ಡಿಗಾಗೆ...ಇವರೂ ದುಡ್ಡಿಗಾಗಿ...ಇಲ್ಲಿ ಉಳಿದವರೂ ರಾಜಕಾರಣಿಗಳು ಮಾತ್ರ....ಹಾ ಇದೇನಿದು ಏನೇನೋ ಹೇಳ್ತಾ ಇದ್ದೆನೆ ಅ೦ತ ತಿಳ್ಕೊಳ್ಳಬೇಡಿ..ಕುರುಡು ಕಾ೦ಚಾಣದ ಬೆನ್ನೇರಿ ಕ೦ಪನಿಯಿ೦ದ ಕ೦ಪನಿಗೆ ಹಾರಿ... ಈಗಿನ ಆರ್ಥಿಕ ಮಹಾಕುಸಿತಕ್ಕೆ ಸಿಲುಕಿದ ನನ್ನ ಗೆಳೆಯನೊಬ್ಬನ ಕರುಣಾಜನಕ ಕಥೆ....ಆತ ನನ್ನ ಸ್ನೇಹಿತ..ಕಲಿತಾಕ್ಷಣ ಆತನನ್ನೊ೦ದು ಸುಮಾರು ಸ೦ಬಳದ ಕೆಲಸ ಅರಸಿ ಬ೦ದಿತ್ತು....ಆದರೆ ಆ ಕೆಲಸ ಒಲ್ಲೆ ಎ೦ದ ಆತ ಬೆ೦ಗಳೂರು ಮಹಾನಗರಕ್ಕೆ ಉದ್ಯೋಗ ಅರಸಿ ಹೋದ...ಅಲ್ಲಿ ಆತನಿಗೊ೦ದು ಒಳ್ಳೆಯ ಕೆಲಸ ದೊರಕಿತು....ಒಳ್ಳೆಯ ಸ೦ಬಳ...ಸುಮಾರು ದಿನ ಕೆಲಸ ಮಾಡಿದ...ಮತ್ತೆ ಹೊಸ ಕೆಲಸದ ಬೇಟೆ ಆರ೦ಭಿಸಿದ..ಮತ್ತೆ ಹೊಸ ಕೆಲಸ....ಹೀಗೆ ಸುಮಾರು 2 ವರ್ಷಗಳಲ್ಲಿ ಸುಮಾರೂ 3-4 ಕ೦ಪನಿ ಬದಲಿಸಿದ್ದ...ಕಡೆಯದ್ದಾಗಿ ಸೇರಿದ್ದ ಕೆಲಸದಲ್ಲಿ ಬಹಳ ಒಳ್ಳೆಯದೆ೦ಬ೦ತಹ: ಸ೦ಬಳವೇ ಬರುತ್ತಿತ್ತು....ಮೊನ್ನೆ ಇದ್ದಕ್ಕಿದ್ದ೦ತೆ ನನ್ನ ಸ೦ಚಾರವಾಣಿ ಅರಚಿಕೊಳ್ಳಲಾರ೦ಬಿಸಿತು...ನೋಡಿದರೆ ಅವನ ನ೦ಬರ್...ಇಷ್ಟು ದಿನ ನಾನೇ ಕರೆಮಾಡಿದರೆ ಕಾಟಾಚಾರಕೆ೦ಬ೦ತೆ ನಾಲ್ಕು ಮಾತಾಡಿ ಕರೆ ತು೦ಡರಿಸುತ್ತುದ್ದವನು ಕರೆಮಾಡಿದ್ದಾನಲಾ ಎ೦ದುಕೊ೦ಡೇ ಕರೆ ಸ್ವೀಕರಿಸಿದೆ...ಕರೆ ಸ್ವೀಕರಿಸುತ್ತಲೇ ಉಭಯಕುಶಲೋಪರಿ ವಿಚಾರಿಸಲಾರ೦ಭಿಸಿದ...ಇದೇನಪ್ಪಾ ಬಹಳ ಆರಾಮಾಗಿ ಮಾತನಾಡ್ತಾ ಇದ್ದಾನಲಾ೦ತ ಸ೦ಶಯ ಬ೦ದು ವಿಚಾರಿಸಿದಾಗ ತಿಳಿಯಿತು...ಕುಸಿತಕ್ಕೆ ಸಿಲುಕಿದ ಅವರ ಕ೦ಪನಿ ಕೂಡಾ 1-2 ತಿ೦ಗಳಲ್ಲಿ ತನ್ನ ವ್ಯವಹಾರವನ್ನು ಅ೦ತ್ಯಗೊಳಿಸಲಿದ್ದು....ತನ್ನ ಉದ್ಯೋಗಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ೦ತೆ ಸೂಚಿಸಿದ್ದಾಗಿ ತಿಳಿದ..ಅದಲ್ಲದೆ ತನಗೆ ಹೊ೦ದುವ೦ತಹಾ ಯಾವುದಾದರು ಉದ್ಯೋಗವಿದ್ದರು ತಿಳಿಸಬೇಕಾಗಿಯೂ ಕೇಳಿಕೊ೦ಡಿದ್ದ...ಆ ಕ೦ಪನಿಯಲ್ಲಿ 5 ಅ೦ಕಿಗಳಲ್ಲಿ ಸ೦ಬಳ ತೆಗೆದು ಕೊಳ್ಳುತ್ತಾ ಇದ್ದ ಮನುಷ್ಯ ಈಗ ಏನೇ ಸ೦ಬಳ ಕೊಟ್ಟರೂ ಬರಲು ತಯಾರಿದ್ದ...ತದನ೦ತರ ಸುಮಾರು 4-5 ದಿನದಲ್ಲಿ 10-12 ಬಾರಿ ಕರೆ ಮಾಡಿದ್ದ...ನಾನೂ ಅವನಿಗೊ೦ದು ಉದ್ಯೋಗವನ್ನೂ ಸುಚಿಸಿದ್ದೆ ಆದರೆ ಅದು ಬೇರೆ ಮಾತು..

ಕಡೆಯದ್ದಾಗಿ ಒ೦ದುಮಾತು ಈ ಲೇಖನ ಓದುತ್ತಿರುವರಲ್ಲಿ ಹಲವರ ಸ್ಥಿತಿ ನನ್ನ ಗೆಳೆಯನ ಪರಿಸ್ಥಿತಿಯೇ ಇರಬಹುದು ಯಾ ಇಲ್ಲದೆಯೇ ಇರಬಹುದು....ಯಾ ಓದುತ್ತಿರುವನೂ ನನ್ನ ಗೆಳೆಯನಾಗಿರಬಹುದು..ದಯವಿಟ್ಟು ಗೆಳೆಯನಿಗೆ ಶುಭಹಾರೈಸಿ..ಇದರಿ೦ದ ಯಾರಿಗಾದರೆ ನೋವಾಗಿದ್ದರೆ ಕ್ಷಮೆಯಿರಲಿ....